ಎಲ್ಲರಿಗೂ ನಮಸ್ಕಾರ.
"ಕ್ರಿಯಾ" ದಲ್ಲಿ ಮೊದಲು ಏನನ್ನು ಬರೆಯಲಿ ? ಯಾವುದರ ಬಗ್ಗೆ ಬರೆಯಲಿ ? ಕನ್ನಡದಲ್ಲೊ ? ಇಂಗ್ಲಿಷಿನಲ್ಲೊ ? ಯಾರನ್ನು ಉದ್ದೇಶಿಸಿ ಬರೆಯಲಿ ಎನ್ನುವ ತಾಕಲಾಟದಲ್ಲೆ ನನ್ನ ಅತ್ಯಾಪ್ತರಾದ ಯುವಕರ ಬಗ್ಗೆಯೆ...ಅವರ ಮನೋ-ತುಮುಲಗಳ ಬಗ್ಗೆಯೆ..ನನ್ನ ಭಾಷೆ ಕನ್ನಡದಲ್ಲೆ...(ಪಾಠ ಮಾಡುವ ಇಂಗ್ಲಿಷಿನಲ್ಲಲ್ಲ)
ಅವರನ್ನು ಉದ್ದೇಶಿಸಿಯೇ ಬರೆ ಎಂದು ಮನಸ್ಸು ಹೇಳಿತು.
ಯಾರು ಈ ಯುವಕರು..? (ಯುವತಿಯರನ್ನೂ ಉದ್ದೇಶಿಸಿಯೆ)
ಏನು-ಎತ್ತ ಅವರ ಮನಸ್ಸು-ದೇಹಗಳು..?
ಅದೇನು..ಈ ಯೌವ್ವನ..?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹದಿನೆಂಟು ವರ್ಷಗಳಿಂದ ಹೆಣಗಾಡಿದ್ದೇನೆ..ಉತ್ತರ ಸಿಕ್ಕುವುದಿರಲಿ..?
ಒಂದಿದ್ದ ಒಂದು ಪ್ರಶ್ನೆ ಇಂದು ರಾಶಿ ರೂಪದಲ್ಲಿದೆ.
ಉತ್ತರ ಹುಡುಕುವುದನ್ನು ನಿಲ್ಲಿಸಿದ್ದೇನೆ.
ಏಕೆಂದರೆ ಅದು ಸಿಕ್ಕದಿದ್ದರೂ "ನಾನೆ" ಕಂಡುಕೊಂಡಿದ್ದೇನೆ.
ಅದು..ಯುವಕರು ಅಂದರೆ, ಯುವತಿಯರು ಅಂದರೆ ಮತ್ತು ಯೌವ್ವನ ಅಂದರೆ.,
"ಶಕ್ತಿ" .."ಶಕ್ತಿ".."ಶಕ್ತಿ" ಹೌದು ಅದೊಂದು ಅದಮ್ಯ.
ಆ ಶಕ್ತಿಯ ಬಳಕೆ ಹೇಗೆ.? ಎಲ್ಲಿ.? ಈ ಶಕ್ತಿಮಾನರನ್ನು ಮತ್ತು ಅವರ ಶಕ್ತಿಯನ್ನು ಬಳಸಿಕೊಳ್ಳುವುದು ಹೇಗೆ.?
ಮತ್ತಷ್ಟು ಪ್ರಶ್ನೆಗಳು..ಮತ್ತೆ ಉತ್ತರಗಳಿಗಾಗಿ ತಡಕಾಟ.
"Youths are not Useless, Youths are Used less"
"ಯುವಕರು ಅನುಪಯುಕ್ತರಲ್ಲ...ಅವರನ್ನು ಕಡಿಮೆ ಉಪಯುಕ್ತರನ್ನಾಗಿಸಲಾಗಿದೆ" ಎನ್ನುವ ಮಾತನ್ನು ಉದಾಹರಿಸಿಕೊಂಡೇ ಈ ವಿಷಯದ ಬಗ್ಗೆ ಮಾತಿಗಿಳಿಯುವುದಾದರೆ ಎಲ್ಲೊ ಅಲ್ಲಿ ಸತ್ಯ ಕಾಣುತ್ತವೆ. ಯೌವ್ವನಿಗರನ್ನು ಸದಾ ಅನುಮಾನಿಸುವ ಹಿರಿಯರ ಒಂದು ಪಡೆಯೆ ಇದೆ ಎಂದು ಆರೋಪಿಸುವ ಯುವಕರ ಒಂದು ದಂಡೇ ಇದೆ. ಈ ಮಾತನ್ನು ಒಪ್ಪುವುದು ಮತ್ತು ಬಿಡುವುದು ಇಲ್ಲಿ ಅಪ್ರಸ್ತುತ.
ಪ್ರಸ್ತುತವಾದದ್ದೆಂದರೆ ಅವರಿಗೆ ಅಗತ್ಯವಿರುವ ಮಾರ್ಗದರ್ಶನ, ಅವಕಾಶ ಮತ್ತು ಮುಖ್ಯವಾಗಿ ಪ್ರೀತಿ ನಿಜವಾಗಿಯೂ ದೊರಕುತ್ತಿದೆಯೆ ಎಂಬುದು. ಇದೆಲ್ಲೆವೂ ಸಿಕ್ಕಿದೆ ಎನ್ನುವುದಾದರೆ ಯಾಕೆ ಕೆಲವು ಯುವಕರು ದಾರಿ ತಪ್ಪಿದ್ದಾರೆ ಅಥವಾ
ತಪ್ಪುತ್ತಿದ್ದಾರೆ ?
ಸಿಕ್ಕೇ ಇಲ್ಲ ಎನ್ನುವುದಾದರೆ ಹಲವು ಯುವಕರು ಸಂಸಾರದ ನೊಗವನ್ನೂ ಹೊತ್ತು ರಾಷ್ಟಕಟ್ಟುವ ಮಹತ್ಕಾರ್ಯದಲ್ಲೂ ನಿರತರಾಗಿರುವುದು ಹೇಗೆ.? ಏಕೆ.?
ಸಧ್ಯ ಸಾಕು..ಪ್ರಶ್ನೆಯೊಡನೆ ಆರಂಭಿಸಿದೆ ಈ ಮೊದಲ ನನ್ನ ಬ್ಲಾಗ್ ಬರಹವನ್ನು. ಪ್ರಶ್ನೆಗಳ ಜೊತೆಯೇ ನಿಲ್ಲಿಸುತ್ತಿದ್ದೇನೆ.
ಉತ್ತರ ಹುಡುಕುವ..!!??
ಜೊತೆಗೆ ಅಭಿಪ್ರಾಯಿಸಿ..
ನಿಮ್ಮವ
-ಪ್ರಸನ್ನಕುಮಾರ್ ಕೆರಗೋಡು