ನಮ್ಮ ಆಲೋಚನೆಗಳ ಫಲಿತಾಂಶ ನಾವು. ನಾವು ಏನನ್ನು ಯೋಚಿಸುತ್ತೇವೆಯೊ ಅದೆ ಆಗುತ್ತೇವೆ. ಏಕೆಂದರೆ ಮನಸ್ಸೆ ಎಲ್ಲವೂ" ಭಗವಾನ್ ಬುದ್ದ ರ ಈ ಮಾತುಗಳು ಎಂದಿಗಿಂತ ಇಂದು ಚೆನ್ನಾಗಿ ಒಪ್ಪುತ್ತವೆ.
ಇಂದು "ವಿಶ್ವ ಮಾನಸಿಕ ಆರೋಗ್ಯ ದಿನ". "ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ ಆರೋಗ್ಯ " ಎನ್ನುವುದು ಈ ವರ್ಷದ ಘೋಷ ವಾಕ್ಯ. ದೊಡ್ಡ ಸಂಖ್ಯೆಯ ಯುವಜನತೆಯನ್ನು ತನ್ನ ಒಡಲಲ್ಲಿ ಸಲಹುತ್ತಿರುವ ಭಾರತ ವಿಶ್ವದ ನೈಜ ಯುವ ರಾಷ್ಟ್ರ. ದೇಶದ ಭವಿಷ್ಯ ಯುವಕರ ಮೇಲೆ ಹಾಗೆ ಅವರ ಆಲೋಚನೆಗಳ ಮೇಲೆ ನಿಂತಿದೆ, ಆಲೋಚನೆಗಳನ್ನು ಅವರ ಮನಸ್ಸು ಉತ್ಪಾದಿಸುತ್ತದೆ. ಅದರಿಂದಾಗಿ ಮನಸ್ಸು ಮತ್ತು ಅದರ ಆರೋಗ್ಯ ಮುಖ್ಯವಾಗುತ್ತವೆ.
ಮನುಷ್ಯನ ಮನಸ್ಸು ಇಂದು ಅತ್ಯಂತ ಸಂಕೀರ್ಣವಾಗತೊಡಗಿದೆ. ದೊಡ್ಡದು ಮತ್ತು ವೈಶಾಲ್ಯತೆ, ದೊಡ್ಡದು ಮತ್ತು ಚಿಕ್ಕದು ಅನ್ನುವ ಹಲವು ಚಿಂತನಾತ್ಮಕ ಅಂಶಗಳ ತೊಳಲಾಟದಲ್ಲಿ ಮನಸ್ಸು ಕುಬ್ಜವಾಗತೊಡಗಿದೆ. ಆಸೆ ಮತ್ತು ನಿರೀಕ್ಷೆಗಳು ದೊಡ್ಡದಾಗುತ್ತಿವೆ. ಅಂಥವುಗಳನ್ನು ಪೂರೈಸಲು ಪೂರಕವಾದ ಭೌತಿಕ ವಾತಾವರಣ ನಮ್ಮಲ್ಲಿ ಕಾಣದಾಗಿದೆ. ಈ ಎರಡರ ಮಧ್ಯೆ ಸಿಕ್ಕಿ ಮನೋವೈಕಲ್ಯಕ್ಕೆ ಒಳಗಾಗಿ ನರಳುತ್ತಿರುವವರ ಸಂಖ್ಯೆ ಬಹಳ ದೊಡ್ಡದೆ ಇದೆ.
ಬದುಕಲು ಅಗತ್ಯವಿರುವ ಎಲ್ಲವೂ ಬಹು ಹೆಚ್ಚಿನದಾಗಿಯೆ, ದೊಡ್ಡದೆ ಆಗಿರಬೇಕು ಎಂದು ಎಲ್ಲರೂ ಯೋಚಿಸಿ ಯೋಜಿಸುತ್ತಿರುವ ಈ ಕಾಲಘಟ್ಟದಲ್ಲಿ
ಇ.ಎಫ್.ಶೂಮೇಕರ್ ಅನ್ನುವ ಬ್ರಿಟಿಷ್ ಮೂಲದ ಜರ್ಮನ್ ಅರ್ಥಿಕ ತಜ್ಞ Small is Beautiful ಎನ್ನುವ ಪುಸ್ತಕದಲ್ಲಿ ಮಂಡಿಸಿರುವ ವಿಚಾರಗಳು ಪ್ರಸ್ತುತವೆನಿಸುತ್ತದೆ. ಗಳಿಸಿದ್ದು, ಗಳಿಸಬೇಕಾದದ್ದು, ಗಳಿಸಲಾರದ ಹಲವುಗಳ ಗೊಂದಲದಲ್ಲಿ ಕಾಲದ ವೇಗದಲ್ಲಿ ಮತ್ತು ಅದರ ಧಾವಂತದಲ್ಲೆ ಜೀವಿಸುತ್ತಿರುವ ಕಾರಣಕ್ಕಾಗಿಯೆ ಮನಸ್ಸು ಸಂಕೀರ್ಣತೆಗೊಳಗಾಗಿದೆ. ಆ ಸಂಕೀರ್ಣ ಮನೊಸ್ಥಿತಿ ಉಂಟು ಮಾಡುತ್ತಿರುವ ಬೇಸರ, ತಲ್ಲಣಗಳು, ಆ ಮೂಲಕ ಒತ್ತಡ ನಂತರದಲ್ಲಿ ವ್ಯಾಕುಲತೆ ಪರಿಣಾಮವಾಗಿ ನಕಾರಾತ್ಮಕ ಆಲೋಚನೆ, ಖಿನ್ನತೆ ಅಂತಿಮವಾಗಿ ಆತ್ಮಹತ್ಯೆಯ ಆಲೋಚನೆ. ಇದು ಒಂದಕ್ಕೊಂದು ಬೆಸೆದುಕೊಂಡು ಮತ್ತು ಸಾಂಕ್ರಾಮಿಕಗೊಂಡು ಜಗತ್ತಿನ ನಾಗರೀಕ ಸಮಾಜವನ್ನು ಆತಂಕದಲ್ಲಿ ದೂಡಿರುವುದು.

ಆಧುನಿಕವಾದ ಯಾಂತ್ರಿಕ ನಾಗರೀಕ ವ್ಯವಸ್ಥೆ ಸೃಷ್ಟಿಸಿರುವ ಖಿನ್ನ ವಾತಾವರಣಕ್ಕೆ ಕೇವಲ ಯುವಜನರಷ್ಟೆ ಬಲಿಯಾಗುತ್ತಿಲ್ಲ. ಹಸುಗೂಸುಗಳಾದಿಯಾಗಿ ಲಿಂಗ, ಜಾತಿ, ವರ್ಗ, ಧರ್ಮವೆನ್ನದೆ ವೃದ್ದರವರೆಗೆ ಇದು ಹರಡಿಕೊಂಡಿದೆ. ಬುದ್ದ ಹೇಳುವ ಹಾಗೆ ಇದೆಲ್ಲದರ ಮೂಲ ಮನಸ್ಸೆ ಆದ್ದರಿಂದ ಮನಸ್ಸು ಮಾತ್ರ ಇದಕ್ಕೆಲ್ಲಾ ಪರಿಹಾರ ಒದಗಿಸಬಲ್ಲದು. ಹಾಗೆ ಪರಿಹಾರ ನೀಡುವ ಮನಸ್ಸೆ ಕೆಟ್ಟಿದೆ ಅಂದರೆ ಇನ್ಯಾರು ಈ ಕೆಲಸ ಮಾಡುವವರು. ಇದ್ದುದರಲ್ಲಿ ಸ್ವಾಸ್ಥ್ಯ ಕಾಪಾಡಿಕೊಂಡ ಕೆಲ ಮನಸ್ಸುಗಳಾದರೂ ಈ ಕೆಲಸ ಕೈಗೆತ್ತಿಕೊಳ್ಳಬೇಕು. ಹಾಗೆ ಒಂದಷ್ಟು ಕರಪ್ಟ್ ಆಗಿರದ ಮನಸ್ಸುಗಳು ಎಂದರೆ ಅದು ಮಕ್ಕಳು ಮತ್ತು ಯುವಜನತೆಯದು. ಇಲ್ಲಿಂದಲೆ ಪರಿಹಾರ ಹುಡುಕುವ ಪ್ರಯತ್ನ ಆಗುವುದು ಒಳಿತು.
ಧನಾತ್ಮಕ ಚಿಂತನೆ ನಡೆಸುವ ಒಂದಷ್ಟು ಮಂದಿ ಸೇರಿ ಪ್ರಪಂಚದಾದ್ಯಂತ ಲಭ್ಯವಿರುವ ವ್ಯಾಕುಲತೆಯನ್ನು ಮತ್ತು ಖಿನ್ನತೆಯನ್ನು ದೂರಮಾಡುವ ಕೌಶಲಗಳನ್ನು ಪಡೆದು ಕಾರ್ಯಪ್ರವೃತ್ತವಾಗಬೇಕಿದೆ. ಅದಕ್ಕೂ ಮುಂಚೆ ಅತಿಯಾದ ಆಸೆಗಳ ಬೀಜ ಬಿತ್ತುವ ಅಂಶಗಳನ್ನು ಬಗ್ಗು ಬಡಿದು ಮುಂದುವರೆಯಬೇಕಿದೆ.
-ಪ್ರಸನ್ನಕುಮಾರ್ ಕೆರಗೋಡು
ಸರ್ ತುಂಬ ಮೌಲ್ಯಯುತವಾದ ವಿಷಯ... 💐💐
ReplyDeleteWell Amrutha
Deleteಇಂದಿನ ಅನಾಗರೀಕತೆಯ ಸಮಾಜಕೆ ನಾಗರೀಕತೆಯ ಹಾಲನ್ನು ಉಣಿಸಲು ಹೊರಟಿರುವ ನಿಮ್ಮಂತ ಸಮಾಜ ಸಂಚಾಲಕರ ಅವಶ್ಶಕತೆ ತುಂಬಾ ಅವಶ್ಯಕವಾಗಿದೆ ಸರ್
ReplyDeleteThank you , May I know who is this ??
Delete